You are here
Home > ಸಿನೆಮಾ > ಯಶ್ ಹಾಗು KGF ಚಿತ್ರತಂಡ ಶಿರಡಿಯಲ್ಲಿ ಪ್ರತ್ಯಕ್ಷ! ಕಾರಣ ಏನು ಗೊತ್ತ?

ಯಶ್ ಹಾಗು KGF ಚಿತ್ರತಂಡ ಶಿರಡಿಯಲ್ಲಿ ಪ್ರತ್ಯಕ್ಷ! ಕಾರಣ ಏನು ಗೊತ್ತ?

ರಾಕಿಂಗ್ ಸ್ಟಾರ್ ಯಶ್ ಹಾಗು KGF ಚಿತ್ರತಂಡ ಇದ್ದಕ್ಕಿದ್ದ ಹಾಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾನ ಆಶೀರ್ವಾದ ಪಡೆದಿದ್ದಾರೆ ಅದಕ್ಕೆ ಕಾರಣ ಏನು ಗೊತ್ತ? KGF ರಾಕಿಂಗ್ ಸ್ಟಾರ್ ಯಶ್ ವೃತ್ತಿ ಬದುಕಿನಲ್ಲಿ ಬಹು ದೊಡ್ಡ ಸಿನಿಮಾ, ಬಹು ನಿರೀಕ್ಷಿತ ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನ ಸೃಷ್ಟಿ ಮಾಡಲು ಹೊರಟಿರುವ ಸಿನಿಮಾ, ಇದೇ ಮೊದಲ ಬಾರಿಗೆ ಹಿಂದಿ, ತೆಲುಗು, ತಮಿಳು,ಮಲಯಾಳಂ ನಲ್ಲಿ ತೆರೆಗೆ ಬರ್ತಿವ ಕನ್ನಡ ಮೊಟ್ಟ ಮೊದಲು ಸಿನಿಮಾ.

ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಪ್ರಚಾರದ ಕೆಲಸ ಇಂದಿನಿಂದ ಆರಂಭವಾಗುತ್ತಿದೆ. ಬಾಲಿವುಡ್ , ಕಾಲಿವುಡ್ , ಟಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯಲು ಸಿದ್ದವಾಗಿರುವ ಅಪ್ಪಟ ಕನ್ನಡಿಗರ ಸಿನಿಮಾ ಈ ಕೆಜಿಎಫ್. ನಿಮಗೆ ಗೊತ್ತಿರುವ ಹಾಗೆ ಕೆಜಿಎಫ್ ಇದೇ ಡಿಸಂಬರ್ 21 ಕ್ಕೆ ತೆರೆಗೆ ಬರ್ತಿದೆ .. ಹೀಗಾಗೆ ಯಶ್ ಸೇರಿದಂತೆ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಶ್ರೀ ಶಿರಡಿ ಸಾಯಿ ಬಾಬಾ , ಕೊಲ್ಲಪುರಿ ಲಕ್ಷ್ಮೀ ದೇವಿಯ ದರ್ಶನ ಪಡೆದಿದ್ದಾರೆ.

‘ಕೆ.ಜಿ.ಎಫ್’ ಸಿನಿಮಾದ ಟ್ರೈಲರ್ ಇದೇ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಂಡಿದೆ. ನಾಳೆಯಿಂದ ಪ್ರಚಾರದ ಕೆಲಸಗಳು ಭರದಿಂದ ಸಾಗಿದ್ದು ಪ್ರಚಾರಕ್ಕಾಗಿಯೇ ಹೊಸ ರೀತಿಯ ಯೋಜನೆಯನ್ನು ಮಾಡಿಕೊಂಡಿದೆ. ಈ ಮಾಹಿತಿಯನ್ನು ಸಾಧ್ಯವಾದಷ್ಟು ಎಲ್ಲ ಕಡೆ ಶೇರ್ ಮಾಡಿ, ನೀವು KGF ಚಿತ್ರಕ್ಕಾಗಿ ಕಾಯುತಿದ್ದರೆ WAITING FOR KGF ಎಂದು ಕಾಮೆಂಟ್ ಮಾಡಿ.

Please follow and like us:

Leave a Reply

Top