You are here
Home > ಸಿನೆಮಾ > ದಿ ವಿಲನ್ ಚಿತ್ರ 19 ನೇ ದಿನ ,ವಿಕ್ಟರಿ 2 ಚಿತ್ರ 5 ನೇ ದಿನ ಎಷ್ಟು ಗಳಿಸಿದೆ ಗೊತ್ತ?

ದಿ ವಿಲನ್ ಚಿತ್ರ 19 ನೇ ದಿನ ,ವಿಕ್ಟರಿ 2 ಚಿತ್ರ 5 ನೇ ದಿನ ಎಷ್ಟು ಗಳಿಸಿದೆ ಗೊತ್ತ?

ಶರಣ್ ಅಭಿನಯದ ವಿಕ್ಟರಿ 2 ಚಿತ್ರ ಬಿಡುಗಡೆಯಾದ ನಾಲ್ಕು ದಿನದಲ್ಲಿ ಬಾರಿ ದಾಖಲೆಯ ಕಲೆಕ್ಷನ್ ಮಾಡಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ, ಈ ಚಿತ್ರ ಶರಣ್ ಅವರ ಕೆರಿಯರ್ ಅಲ್ಲಿ ಅತಿ ಕಡಿಮೆ ದಿನದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂದರೆ ಸುಳ್ಳಾಗುವುದಿಲ್ಲ.

ನಿರ್ಮಾಪಕರ ಪ್ರಕಾರ ಈ ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆಯಂತೆ, ದಿ ವಿಲನ್ ಚಿತ್ರ ಬಿಡುಗಡೆಯಾಗಿ 19 ದಿನ ಕಳೆದರು ಕೂಡ ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿದುಬಂದಿದೆ,
ದಿ ವಿಲನ್ ಚಿತ್ರ ಸಿಂಗಲ್ ಸ್ಕ್ರೀನ್ ಗಳಿಗಿಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆಯಂತೆ.

ಈ ವಾರದ ಕೊನೆಯಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಇರುವ ಕಾರಣ ಕಲೆಕ್ಷನ್ ಹೆಚ್ಚಾಗುವ ಸಂಭವ ಇದೇ. ದಿ ವಿಲನ್ ಚಿತ್ರ ಬಿಡುಗಡೆಯಾದ 19 ದಿನದಲ್ಲಿ ಸುಮಾರು 108 ರಿಂದ 110 ಕೋಟಿ ಕಲೆಕ್ಷನ್ ಮಾಡಿದರೆ ಎಂದು ಹೇಳಲಾಗುತ್ತಿದೆ ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ, ಹಾಗು ವಿಕ್ಟರಿ 2 ಚಿತ್ರ 5 ದಿನದಲ್ಲಿ 11 ರಿಂದ 12 ಕೋಟಿ ಗಳಿಸಿದೆಯಂತೆ.

ದಿ ವಿಲನ್ ಚಿತ್ರ 19 ನೇ ದಿನ 1 . 4 ಕೋಟಿ ಗಳಿಸಿದೆ ಹಾಗು ಶರಣ್ ಅಭಿನಯದ ವಿಕ್ಟರಿ 2 ಚಿತ್ರ 5 ನೇ ದಿನ 1 . 3 ಕೋಟಿ ಗಳಿಸಿದೆ ಎಂದು ಗಾಂಧಿನಗರ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ, ನಿಮ್ಮ ಪ್ರಕಾರ ಈ ಎರಡು ಚಿತ್ರದಲ್ಲಿ ಯಾವುದು ಜನರ ಮನಸ್ಸು ಗೆದ್ದಿದೆ ಎಂದು ಕಾಮೆಂಟ್ ಮಾಡಿ.

Please follow and like us:

Leave a Reply

Top