You are here
Home > ಸಿನೆಮಾ > ತೆಲುಗು ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಡೇಟಿಂಗ್, ಯಾರು ಗೊತ್ತ?

ತೆಲುಗು ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಡೇಟಿಂಗ್, ಯಾರು ಗೊತ್ತ?

ರಶ್ಮಿಕಾ ಮಂದಣ್ಣ ಅವರು ಅತಿ ಕಡಿಮೆ ಅವಧಿಯಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದಂತಹ ನಟಿ, ಕೇವಲ ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದ ಈಕೆ ದೊಡ್ಡ ದೊಡ್ಡ ನಟಿಯರಿಗಿಂತ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು ಹಾಗು ಕರ್ನಾಟಕದ ಕ್ರಶ್ ಎಂಬ ಪಟ್ಟವನ್ನು ಕೂಡ ಪಡೆದುಕೊಂಡಿದ್ದರು, ಆದರೆ ಅದೆಲ್ಲ ಹೆಚ್ಚು ದಿನ ಉಳಿಯಲಿಲ್ಲ ಎಷ್ಟು ಬೇಗ ಅಭಿಮಾನಿಗಳ ಮನಸ್ಸನ್ನು ಗೆದ್ದರೋ ಅಷ್ಟೇ ಬೇಗ ಕನ್ನಡಿಗರು ಆಕೆಯ ಮೇಲೆ ತಿರುಗಿ ಬೀಳುವ ಪರಿಸ್ಥಿತಿ ಎದುರಾಯಿತು.

ಅದಕ್ಕೆ ಪ್ರಮುಖ ಕಾರಣ ಎಂದರೆ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್ ಅಪ್ , ಅದಕ್ಕೆ ನಿಖರವಾದ ಕಾರಣ ಏನು ಎನ್ನುವುದನ್ನು ಯಾರು ಕೂಡ ಮಾಧ್ಯಮದ ಮುಂದೆ ಹೇಳಿಕೊಂಡಿಲ್ಲ, ಇದಾದ ನಂತರ ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಬೀಡುಬಿಟ್ಟಿದ್ದಾರೆ, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ, ಇತ್ತೀಚಿನ ಮಾಹಿತಿಯ ಪ್ರಕಾರ ರಶ್ಮಿಕಾ ಅವರು ತೆಲುಗಿನ ಟಾಪ್ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದೆ, ಅದು ಕೂಡ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ.

ಡೇಟಿಂಗ್ ಎಂದರೆ ರಿಯಲ್ ಲೈಫನಲ್ಲಿ ಅಲ್ಲ, ರೀಲ್ ಲೈಫ್ ನಲ್ಲಿ ಅಷ್ಟೇ, ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದರಂತೆ, ಈ ಚಿತ್ರವನ್ನು ಖ್ಯಾತ ನಿರ್ದೇಶಕ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ, ಇದೀಗ ಕನ್ನಡದಲ್ಲಿ ಕೂಡ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರಬಂದಿದೆ, ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರಂತೆ

Please follow and like us:

Leave a Reply

Top