You are here
Home > ಸಿನೆಮಾ > ರಕ್ಷಿತ್ ಶೆಟ್ಟಿ ಹೊಸ ಗರ್ಲ್ ಫ್ರೆಂಡ್ ಯಾರು ಗೊತ್ತ? ಈಕೆ ಕೂಡ ದೊಡ್ಡ ನಟಿ

ರಕ್ಷಿತ್ ಶೆಟ್ಟಿ ಹೊಸ ಗರ್ಲ್ ಫ್ರೆಂಡ್ ಯಾರು ಗೊತ್ತ? ಈಕೆ ಕೂಡ ದೊಡ್ಡ ನಟಿ

ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಮುರಿದು ಬೀಳಲು ಕಾರಣ ಏನು ಎಂದು ದಿನಕ್ಕೊಂದು ಗಾಸಿಪ್ ಗಳು ಬರುತ್ತಲೇ ಇವೆ, ಆದರೆ ಇವರಿಬ್ಬರು ಮಾತ್ರ ತಮ್ಮ ನಡುವಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು, ಅವರವರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ,

ಆದರೆ ರಕ್ಷಿತ್ ಶೆಟ್ಟಿ ಬಗ್ಗೆ ಗಾಂಧಿನಗರದಲ್ಲಿ ಒಂದು ಸುದ್ದಿ ಬಾರಿ ಚರ್ಚೆ ಆಗುತ್ತಿದೆ ಅದೇನಪ್ಪ ಎಂದರೆ ರಶ್ಮಿಕಾ ಮಂದಣ್ಣ ಜೊತೆ ಎಂಗೇಜ್ಮೆಂಟ್ ಮುರಿದುಬಿದ್ದ ನಂತರ ರಕ್ಷಿತ್ ಶೆಟ್ಟಿ ಗೆ ಹೊಸ ಸುಂದರಿಯೊಬ್ಬಳು ಸಿಕ್ಕಿದ್ದಾಳಂತೆ, ಆಕೆ ಕೂಡ ಕನ್ನಡ ಚಿತ್ರರಂಗದ ಮುದ್ದು ಚೆಲುವೆ , ಆ ನಟಿ ಬೇರಾರು ಅಲ್ಲ ಮೇಘನಾ ಗವನ್ಕರ್.

ಇತ್ತೀಚೆಗೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ನಟಿಯರು ಭಾಗವಹಿಸಿದ್ದರು, ಅದರಲ್ಲಿ ರಕ್ಷಿತ್ ಶೆಟ್ಟಿ ಮತ್ತು ಮೇಘನಾ ಕೂಡ ಇದ್ದರು, ಇದೀಗ ಅವರಿಬ್ಬರೂ ಜೊತೆಯಲ್ಲಿ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ, ಈ ಫೋಟೋ ವೈರಲ್ ಆಗುತಿದ್ದ ಹಾಗೆಯೆ ಇವರಿಬ್ಬರ ನಡುವೆ ಏನೋ ಇದೆ ಎಂದು ಗಾಂಧಿನಗರದಲ್ಲಿ ಗುಸು ಗುಸು ಶುರುವಾಗಿದೆ.

 

ಇವರಿಬ್ಬರ ಸ್ನೇಹ ಹೊಸದೇನಲ್ಲ ರಕ್ಷಿತ್ ಶೆಟ್ಟಿ ಅಭಿನಯದ ಮೊದಲ ಚಿತ್ರ ತುಗ್ಲಕ್ ಚಿತ್ರದಲ್ಲಿ ಮೇಘನಾ ಅವರೇ ನಾಯಕಿಯಾಗಿ ನಟಿಸಿದ್ದರು. ಇಷ್ಟೇ ಅಲ್ಲದೆ ಇವರಿಬ್ಬರ ಫೋಟೋ ಗೆ ಅಭಿಮಾನಿಗಳು ವಾವ್ ಸೂಪರ್ ಜೋಡಿ, ನೀವಿಬ್ಬರು ಯಾಕೆ ಮದುವೆಯಾಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ,ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾಯ್ದು ನೋಡಬೇಕು, ಈ ಜೋಡಿ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.

Please follow and like us:

Leave a Reply

Top