You are here
Home > ಸಿನೆಮಾ > ಅಭಿಮಾನಿಗಳಿಗೆ ಬೈದವರಿಗೆ ಪುನೀತ್ ರಾಜಕುಮಾರ್ ಏನು ಮಾಡಿದ್ದಾರೆ ನೋಡಿ, ಈಗಲೇ ಶೇರ್ ಮಾಡಿ

ಅಭಿಮಾನಿಗಳಿಗೆ ಬೈದವರಿಗೆ ಪುನೀತ್ ರಾಜಕುಮಾರ್ ಏನು ಮಾಡಿದ್ದಾರೆ ನೋಡಿ, ಈಗಲೇ ಶೇರ್ ಮಾಡಿ

ದಿ ವಿಲನ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ನಿರ್ದೇಶಕ ಪ್ರೇಮ್ ಅವರು ತುಂಬಾ ಗರಂ ಆಗಿದ್ದರು ಅದಕ್ಕೆ ಮೊದಲ ಕಾರಣ ಎಂದರೆ ಸಿನಿಮಾ ಪ್ರದರ್ಶನದ ವೇಳೆ ಕೆಲವರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾ ಅಲ್ಲಿ ಅಪ್ಲೋಡ್ ಮಾಡುತಿದ್ದರು, ಇನ್ನೊಂದು ಪ್ರಮುಖ ಕಾರಣ ಎಂದರೆ ಸಿನಿಮಾ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದವು.

ಅದರ ಜೊತೆ ಶಿವಣ್ಣ ಅವರ ಅಭಿಮಾನಿಗಳು ಕೂಡ ಪ್ರೇಮ್ ಶಿವಣ್ಣ ಅವರನ್ನು ಚಿತ್ರದಲ್ಲಿ ಸರಿಯಾಗಿ ತೋರಿಸಿಲ್ಲ ಎಂದು ಪ್ರತಿಭಟನೆ ಮಾಡಿದ್ದರು, ಇವನ್ನೆಲ್ಲ ನೋಡಿ ಬೇಸರಗೊಂಡ ಪ್ರೇಮ್ ಅವರು ಅಭಿಮಾನಿಗಳ ಮೇಲೆ ಕಿಡಿಕಾರಿದ್ದರು ಹಾಗು ಬಾಯಿಗೆ ಬಂದ ಹಾಗೆ ಬೈದಿದ್ದರು.

ಇದೀಗ ಇದಕ್ಕೆ ಸರಿಯಾಗಿ ಉತ್ತರ ಕೊಡುವ ರೀತಿ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಅಭಿನಯದ 29ನೇ ಸಿನಿಮಾದ ಟೈಟಲ್ `ಯುವರತ್ನ’ ಬಿಡುಗಡೆ ಕಾರ್ಯಕ್ರಮ ನೆನ್ನೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಪ್ರೀತಿಯಿಂದ ಈ ಮಟ್ಟಕ್ಕೆ ಕರೆದುಕೊಂಡು ಬಂದಿದ್ದೀರಿ.

ಅಭಿಮಾನಿಗಳಿಗೆ ಸದಾ ಧನ್ಯವಾದಗಳನ್ನು ಹೇಳುತ್ತೇನೆ. ಅಭಿಮಾನಿಗಳನ್ನ ಎಂದಿಗೂ ಬೇರೆ ವಿಚಾರಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ ಎಂದು ಕಡಕ್ಕಾಗಿಯೇ ಹೇಳಿದ್ದಾರೆ, ನೀವು ಕೂಡ ಅಪ್ಪು ಅವರ ಮಾತನ್ನು ಒಪ್ಪುವುದಾದರೆ love you ಅಪ್ಪು ಎಂದು ಕಾಮೆಂಟ್ ಮಾಡಿ.

Please follow and like us:

Leave a Reply

Top