You are here
Home > ಕಿರುತೆರೆ > ಮತ್ತೊಮ್ಮೆ ವೇದಿಕೆ ಮೇಲೆ ಕಣ್ಣೀರಿಟ್ಟ ಹನುಮಂತ, ಕಾರಣ ಏನು ಗೊತ್ತ?

ಮತ್ತೊಮ್ಮೆ ವೇದಿಕೆ ಮೇಲೆ ಕಣ್ಣೀರಿಟ್ಟ ಹನುಮಂತ, ಕಾರಣ ಏನು ಗೊತ್ತ?

ಜಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತ ಸಾವಿರಾರು ಜನರ ಮುಂದೆ ಕಣ್ಣೀರಿಟ್ಟಿದ್ದಾರೆ, ಅದಕ್ಕೆ ಕಾರಣ ಕೂಡ ಜಿ ವಾಹಿನಿ ಯವರು ಮಾಡಿದ ಈ ಒಂದು ಕೆಲಸ, ಹಾಗಾದರೆ ಅದೇನು ಎಂದು ನೋಡೋಣ ಬನ್ನಿ. ಕಳೆದ ಭಾನುವಾರ ಜಿ ಕನ್ನಡ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ.

ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿಯರು ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಜನರು ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು.

ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು. ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು.

ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು,, ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ. ಹನುಮಂತನ ಈ ಸಾಧನೆ ನಿಮಗೂ ಕೂಡ ಇಷ್ಟವಾಗಿದ್ದರೆ ಶೇರ್ ಮಾಡಿ .

Please follow and like us:

Leave a Reply

Top