You are here
Home > ಸಿನೆಮಾ > ಚಿಕ್ಕಣನ ಸೀಕ್ರೆಟ್ ಮದುವೆ ವಿಡಿಯೋ ಲೀಕ್! ಶಾಕಿಂಗ್

ಚಿಕ್ಕಣನ ಸೀಕ್ರೆಟ್ ಮದುವೆ ವಿಡಿಯೋ ಲೀಕ್! ಶಾಕಿಂಗ್

ಸ್ಯಾಂಡಲ್ವುಡ್ ನ ‘ಕಾಮಿಡಿ ಕಿಂಗ್’ ಎಂದರೆ ಅದು ಚಿಕ್ಕಣ್ಣ , ಅವರು ಇದ್ದಲ್ಲಿ ​ಭರ್ಜರಿ ನಗು ಇರುತ್ತೆ. ಸಿನಿಮಾ ಇಂಡಸ್ಟ್ರಿಯಲ್ಲೂ ಹತ್ತು ವರ್ಷದಿಂದ ಎಲ್ಲರನ್ನು ನಗಿಸುತಿದ್ದಾರೆ. ಇಂತಹ ಚಿಕ್ಕಣ್ಣ ಈಗ ಸಪ್ತಪದಿ ತುಳಿದಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾ ಅಲ್ಲಿ ಬಾರಿ ಸುದ್ದಿಯಾಗುತ್ತಿದೆ, ಅದೂ ಕೂಡ ‘ಕಾಮಿಡಿ ಕ್ವೀನ್’​ ನಯನಾ ಜೊತೆಗೆ ಎಂದರೆ ಇನ್ನು ಶಾಕ್ ಆಗುತ್ತಾರೆ.

ಯಾಕೆಂದರೆ ಅವರಿಗೆ ಈಗಾಗಲೇ ಮದುವೆಯಾಗಿದೆ, ಈ ಸುದ್ದಿ ಕೇಳಿದ ತಕ್ಷಣ ಎಲ್ಲರು ಕೂಡ ಚಿಕ್ಕಣ್ಣ ಅವರು ನಿಜಜೀವನದಲ್ಲಿ ಮದುವೆಯಾಗಿದ್ದಾರೆ ಎನ್ನುವ ಪ್ರೆಶ್ನೆ ಮೂಡುತ್ತದೆ,ಆದರೆ ಇದು ನಿಜಜೀವನದ ಮದುವೆಯಲ್ಲ, ಇದು ರೀಲ್ ಮದುವೆ ಅಷ್ಟೇ, ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ದಲ್ಲಿ ಚಿಕ್ಕಣ್ಣ ಕಲ್ಯಾಣ..!

ಸದ್ಯ ನಿಖಿಲ್ ಕುಮಾರ್​ ನಟನೆಯ ‘ಸೀತಾರಾಮ ಕಲ್ಯಾಣ’ ಶೂಟಿಂಗ್​ನಲ್ಲಿ ಚಿಕ್ಕಣ್ಣ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ಕೂಡ ಮೇಜರ್ ಅಟ್ರ್ಯಾಕ್ಷನ್​. ನಿಖಿಲ್​ ಗೆ ಗೆಳೆಯನಾಗಿ ಚಿಕ್ಕಣ್ಣ ನಟಿಸ್ತಿದ್ದಾರೆ.ಚಿಕ್ಕಣ್ಣಗೆ ‘ಕಾಮಿಡಿ ಕ್ವೀನ್​’ ನಯನಾ ಜೋಡಿಯಾಗಿದ್ದಾರೆ. ಇಬ್ಬರ ಮದುವೆ ಸನ್ನಿವೇಶವನ್ನು ಚಿತ್ರತಂಡ ಅದ್ಧೂರಿಯಾಗಿ ಚಿತ್ರೀಕರಿಸಿದೆ. ಈ ದೃಶ್ಯದಲ್ಲಿ ನಿಖಿಲ್​ ಕುಮಾರ್​, ರಚಿತಾ ರಾಮ್​, ಮಧುಬಾಲಾ ಕೂಡ ಕಾಣಿಸಿಕೊಳ್ತಾರೆ. ಈ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ, ಚಿಕ್ಕಣನ ಮದುವೆ ನೋಡಬೇಕು ಎನ್ನುವವರು ಈ ಚಿತ್ರ ಬಿಡುಗಡೆಯಾಗುವ ವರೆಗೂ ಕಾಯಲೇ ಬೇಕು.

Please follow and like us:

Leave a Reply

Top