You are here
Home > ಜ್ಯೋತಿಷ್ಯ > ನವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುವಿರಿ

ನವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುವಿರಿ

 

ಕರುನಾಡಿನ ಸಮಸ್ತ ಜನರು ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ . ನವರಾತ್ರಿಯ ಸಂದರ್ಭದಲ್ಲಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತಾರೆ. ಶುಭ್ರ ಮತ್ತು ಶಾಂತವಾದ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ . ಈ ನವರಾತ್ರಿಯ ಸಂದರ್ಭದಲ್ಲಿ ನಿಮ್ಮ ಮನೆಗೆ ಈ ನಾಲ್ಕು ವಸ್ತುಗಳನ್ನು ತಂದು ಲಕ್ಷ್ಮೀ ದೇವಿಗೆ ಅರ್ಪಿಸಿದರೆ ಆಕೆ ನಿಮ್ಮ ಯಾವುದೇ ಈಡೇರಿಕೆ ಇದ್ದರು ನೆರವೇರಿಸುತ್ತಾಳೆ.

ಮೊದಲನೆಯದಾಗಿ ಕಮಲದ ಹೂವು ಹೌದು ಲಕ್ಷ್ಮೀದೇವಿಗೆ ಅತೀ ಪ್ರಿಯವಾದ ಹೂಗಳಲ್ಲಿ ಕಮಲದ ಹೂ ಮೊದಲ ಸ್ಥಾನದಲ್ಲಿರುತ್ತದೆ. ಆ ಕಾರಣಕ್ಕಾಗಿ ಈ ನವರಾತ್ರಿಯಂದು ನಿಮ್ಮ ಮನೆಗೆ ಕಮಲದ ಹೂ ತೆಗೆದುಕೊಂಡು ಹೋಗಿ. ಕಮಲದ ಮೇಲೆ ಕುಳಿತಿರುವ ಲಕ್ಷ್ಮೀಯ ಪೋಟೊವನ್ನು ಮನೆಯಲ್ಲಿಡುವುದು ಶುಭಕರ.

 

 

ಎರಡನೆಯದು ಚಿನ್ನ ಅಥವಾ ಬೆಳ್ಳಿ ನಾಣ್ಯ ಹೌದು ನಮ್ಮ ಭಾರತೀಯ ಸಂಪ್ರದಾಯದಂತೆ ಹಬ್ಬಗಳ ಸಂದರ್ಭದಲ್ಲಿ ಬಂಗಾರ ಅಥವಾ ಬೆಳ್ಳಿಯ ನಾಣ್ಯಗಳನ್ನು ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ವಾಡಿಕೆ .ಅದರಲ್ಲೂ ದಸರಾ ಮತ್ತು ದೀಪಾವಳಿಯಲ್ಲಿ ತಪ್ಪದೇ ಖರೀದಿಸುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನು ಮನೆಗೆ ತನ್ನಿ. ನಾಣ್ಯಗಳ ಮೇಲೆ ಲಕ್ಷ್ಮೀ ಅಥವಾ ಗಣೇಶನ ಪೋಟೊ ಇದ್ದರೆ ಒಳ್ಳೆಯದು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

 

 

ಮೂರನೆಯದು ನವಿಲುಗರಿ, ಸರಸ್ವತಿಯ ಕೃಪೆಗೆ ಪಾತ್ರರಾಗಬೇಕಾದರೆ ಪ್ರತಿಯೊಬ್ಬರ ಮನೆಯ ದೇವರ ಕೊನೆಯಲ್ಲಿ ನವಿಲುಗರಿ ಇರಬೇಕು. ಸರಸ್ವತಿಯ ವಾಹನ ನವಿಲು ಆಗಿರುವುದರಿಂದ, ನವಿಲುಗರಿ ಮನೆಯಲ್ಲಿದ್ದರೆ ಸರಸ್ವತಿ ನಿಮ್ಮ ಮನೆಯಲ್ಲೇ ನೆಲೆಸಿರುತ್ತಾಳೆ.

 

 

ಕಡೆಯದು ಲಕ್ಷ್ಮೀ ದೇವಿಯ ಪೋಟೊ ಹೌದು ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯ ಪೋಟೊ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಣಕಾಸಿನ ಸಮಸ್ಯೆ ಇದ್ದಲ್ಲಿ ಅಥವಾ ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದುಕೊಂಡಿದ್ದರೆ,, ಕಮಲದ ಮೇಲೆ ಕುಳಿತಿರುವ ಲಕ್ಷ್ಮೀ ದೇವಿಯ ಕೈಯಿಂದ ನಾಣ್ಯ ಬೀಳಿಸುತ್ತಿರುವ ಫೋಟೋ ತಂದರೆ ಇನ್ನು ಒಳ್ಳೆಯದು. ಈ ಮಾಹಿತಿ ಇಷ್ಟವಾಗಿದ್ದರೆ ಈಗಲೇ ಎಲ್ಲರಿಗು ಶೇರ್ ಮಾಡಿ

Please follow and like us:

Leave a Reply

Top