You are here
Home > News Updates > 21 ವರ್ಷಗಳಿಂದ ಸುಧಾಮೂರ್ತಿ ಹೊಸ ಸೀರೆ ತೆಗೆದುಕೊಂಡಿಲ್ಲ ಏಕೆ ದುಡ್ಡಿಲ್ವಾ ? ಓದಿ ಶಾಕ್ ಆಗ್ತೀರಾ ! Samacharaprabha.com

21 ವರ್ಷಗಳಿಂದ ಸುಧಾಮೂರ್ತಿ ಹೊಸ ಸೀರೆ ತೆಗೆದುಕೊಂಡಿಲ್ಲ ಏಕೆ ದುಡ್ಡಿಲ್ವಾ ? ಓದಿ ಶಾಕ್ ಆಗ್ತೀರಾ ! Samacharaprabha.com

ಸುಧಾಮೂರ್ತಿ ಅವರು ಕರ್ನಾಟಕದಲ್ಲಿ ಐ ಟಿ ಸಾಫ್ಟ್ವೇರ್ ಕಂಪನಿ ಶುರು ಮಾಡಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡಿ ಕೊಟ್ಟಿರುವ ಇನ್ಫೋಸಿಸ್ ನ ಮುಖ್ಯಸ್ಥೆ .

ಸುಧಾಮೂರ್ತಿ ಅವರು ಮನಸ್ಸು ಮಾಡಿದರೆ ಅವರ ಹತ್ತಿರ ಇರುವ ಅಪಾರ ಹಣದಿಂದ ಗಂಟೆಗೆ ಒಂದು ಸೀರೆ ಖರೀದಿಸಿ ಉಟ್ಟುಕೊಳ್ಳಬಹುದು , ಆದರೆ ವಿಚಿತ್ರ ಅಂದರೆ ಸುಮಾರು 21 ವರ್ಷಗಳಿಂದ ಒಂದೇ ಒಂದು ಹೊಸ ಸೀರೆಯನ್ನು ಖರೀದಿಸಿಲ್ಲವಂತೆ.

ಹೌದು ಇದು ನಿಜ ಇಂದಿನ ಆಧುನಿಕ ಮಾಡ್ರನ್ ಜಗತ್ತಿನಲ್ಲಿ ತಿಂಗಳಿಗೆ ಏನಿಲ್ಲ ಅಂದ್ರು ಮೂರೂ – ನಾಲ್ಕು ಜೊತೆ ಬಟ್ಟೆ ಖರೀದಿಸುತ್ತಾರೆ ಅದರಲ್ಲೂ ಬಟ್ಟೆ ಖರೀದಿಯಲ್ಲಿ ಮಹಿಳೆಯರದು ಎತ್ತಿದ ಕೈ . ಆದರೆ ಸುಧಾಮೂರ್ತಿ ಅವರು ಏಕೆ ಹೊಸ ಬಟ್ಟೆ ಖರೀದಿಸುವುದಿಲ್ಲಾ ಏಕೆ ಗೊತ್ತಾ ?

ಇದಕ್ಕೆ ಉತ್ತರ ಸುಧಾಮೂರ್ತಿ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ .
ಸಾಮಾನ್ಯವಾಗಿ ಜನಗಳು ಕಾಶೀಯಾತ್ರೆಗೆ ಹೋದ ಸಂದರ್ಭದಲ್ಲಿ ಯಾವುದಾದ್ರೂ ವೈಭೋಗದ ವಸ್ತುವನ್ನು ತ್ಯಜಿಸುವ ನಿರ್ಧಾರ ಮಾಡುತ್ತಾರೆ .

ಅದೇ ರೀತಿ ಸುಧಾ ಮೂರ್ತಿ ಅವರು ಇನ್ನು ಮುಂದೆ ನಾನು ಹೊಸ ಸೀರೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರಂತೆ , ಅದರ ಪ್ರಕಾರವಾಗಿ ಅಂದಿನಿಂದ ಇಂದಿನವರೆಗೂ 21 ವರ್ಷಗಳಿಂದ ಒಂದು ಹೊಸ ಸೀರೆಯನ್ನು ಸುಧಾ ಅವರು ತೆಗೆದು ಕೊಂಡಿಲ್ಲವಂತೆ .

ಎಷ್ಟೇ ದೊಡ್ಡ ವ್ಯಕ್ತಿಯಾದರು ಇವರ ಸರಳತೆಗೆ ನಾವೆಲ್ಲಾ ಹ್ಯಾಟ್ಸ್ ಆಫ್ ಹೇಳಲೇಬೇಕು .

Please follow and like us:

Leave a Reply

Top