You are here
Home > ಆರೋಗ್ಯ > ಹಾಗಲಕಾಯಿ ನಾಲಿಗೆಗೆ ಕಹಿ, ಆರೋಗ್ಯಕ್ಕೆ ಸಿಹಿ…!

ಹಾಗಲಕಾಯಿ ನಾಲಿಗೆಗೆ ಕಹಿ, ಆರೋಗ್ಯಕ್ಕೆ ಸಿಹಿ…!

ಕಹಿಯಾದ ಗುಣ ಹೊಂದಿರುವ ಹಾಗಲಕಾಯಿ ಎಂದರೆ ಮುಖ ಕಿವಿಚಿಕೊಳ್ಳುವವರು ಬಹಳ. ಆದರೆ, ಈ ಹಾಗಲಕಾಯಿ ಹಲವಾರು ರೀತಿಯ ಔಷಧೀ ಯ ಗುಣಗಳನ್ನು ಹೊಂದಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ.  ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್ ಹಾಗೂ ಆಫ್ರಿಕನ್ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಜೀರ್ಣ ಕ್ರಿಯೆಗೆ ಸಹಕಾರಿ :
ಕಹಿಯ ರುಚಿಯಿರುವ ಹಾಗಲಕಾಯಿಯು ಆಹಾರ ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆಂದು ಹೇಳಲಾಗುತ್ತದೆ. ಅಲ್ಲದೇ
ಅಜೀರ್ಣ ಹಾಗು ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿಯಾಗಿದೆ. ಇದು ಎದೆ ಉರಿ ಹಾಗೂ ಹುಣ್ಣುಗಳನ್ನು ಉಂಟು ಮಾಡುತ್ತದೆಂದು ಭಾವಿಸಲಾಗುತ್ತದೆ. ಈ ಋಣಾತ್ಮಕ ಪರಿಣಾಮಗಳು, ಶಮನಕಾರಿ ಹಾಗೂ ತೀಕ್ಷ್ಣವಲ್ಲದ ಉರಿಯೂತ ಮಾಡ್ಯೂಲೇಟರ್ ಆಗಿ ಇದರ ಕಾರ್ಯವು ಬಹಳ ಸೀಮಿತವಾಗಿದೆ.

ಲಾಡಿಹುಳ ಖಾಯಿಲೆ ನಿರೋಧಕ :
ಹಾಗಲಕಾಯಿಯನ್ನು, ಜಠರಗರುಳಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ. ಅದರ ರಸವು, ನೇಮಟೋಡ್ ವರ್ಗದ ಲಾಡಿಯಂತಹ ಹುಳು ಕಯೇನೋರ್ಹಬ್ಡಿಟಿಸ್ ಎಲೆಗನ್ಸ್ ವಿರುದ್ಧ ವಿಟ್ರೋನಲ್ಲಿ ಚುರುಕುಗೊಂಡಿರುವುದು ಕಂಡುಬಂದಿದೆ.

ಮಲೇರಿಯಾ ನಿರೋಧಕ :
ಹಾಗಲಕಾಯಿಯಲ್ಲಿ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಹಾಗಲಕಾಯಿಯು ಮಲೇರಿಯಾ ರೋಗ ತಡೆಗಟ್ಟುವಲ್ಲಿ ಹಾಗೂ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆಯೆಂದು ಏಷಿಯಾದಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗುತ್ತದೆ. ಪನಾಮ ಹಾಗು ಕೊಲಂಬಿಯಾದÀಲ್ಲೂ ಸಹ ಈ ಉದ್ದೇಶಗಳಿಗಾಗಿ ಅದರ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ. ಪ್ರಾಯೋಗಿಕ ಅಧ್ಯಯನಗಳು, ಕೆಲವೊಂದು ಜÁತಿಯ ಹಾಗಲಕಾಯಿಗಳು ಮಲೇರಿಯಾ-ಪ್ರತಿರೋಧಕ ಕಾರ್ಯ ನಿರ್ವಹಿಸುತ್ತವೆಂದು ದೃಢಪಡಿಸಿವೆ.

ವೈರಸ್ ನಿರೋಧಕ ಹಾಗಲಕಾಯಿ :
ಟೊಗೊನಲ್ಲಿ, ಸಿಡುಬು ಹಾಗೂ ದಡಾರದಂತಹ ರೋಗಗಳ ವಿರುದ್ಧ ಈ ಜÁತಿ ಸಸ್ಯವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಎಲೆಯ ರಸದಲ್ಲಿ ನಡೆಸಲಾದ ಪರೀಕ್ಷೆಗಳು ಹರ್ಪಿಸ್ ಸಿಂಪ್ಲೆಕ್ಸ್ ಟೈಪ್ 1 ವೈರಸ್‍ನ ವಿರುದ್ಧ ವಿಟ್ರೋ ಚಟುವಟಿಕೆ ನಡೆಸುತ್ತದೆಂದು ಹೇಳಲಾಗಿದೆ. ಇದಕ್ಕೆ ಮೊಮೊರ್ಡಿಸಿನ್‍ಗಳಿಗೆ ಬದಲಾಗಿ ಗುರುತಿಸಲಾದ ಸಂಯುಕ್ತಗಳೇ ಸ್ಪಷ್ಟವಾದ ಕಾರಣ. ಹಾಗಲಕಾಯಿಯಲ್ಲಿರುವ ಸಂಯುಕ್ತಗಳು ಊಗಿ ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ. ಊಗಿ ಸೋಂಕಿನ ಮೇಲೆ ಪರಿಣಾಮ ಬೀರುವ ಹಾಗಲಕಾಯಿಯಿಂದ ಬೇರ್ಪಡಿಸಲಾದ ಹೆಚ್ಚಿನ ಸಂಯುಕ್ತಗಳು, ಪ್ರೊಟೀನ್‍ಗಳು ಅಥವಾ ಲೆಕ್ಟಿನ್‍ಗಳಾಗಿರುತ್ತವೆ. ಅವೆರಡರಲ್ಲಿ ಯಾವುದನ್ನು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ. ಇದಕ್ಕಿಂತ ಭಿನ್ನವಾಗಿ ಹಾಗಲಕಾಯಿಯ ರಸ ಕುಡಿದರೆ ಸೋಂಕಿತ ಜನರಲ್ಲಿ ಊಗಿ ಹರಡುವುದು ನಿಧಾನಗೊಳ್ಳುತ್ತದೆ. ಹಾಗಲಕಾಯಿಯ ರಸ ಸೇವಿಸಿದರೆ, ಅದು ಊಗಿ ನಿರೋಧಕ ಔಷಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು. ಆದರೆ ಒಂದು ಪ್ರನಾಳದಲ್ಲಿರುವ ವೈರಸ್‍ಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮಾತ್ರ ಈ ಫಲಿತಾಂಶ ಪ್ರಕಟಗೊಂಡಿರುವುದು ಸ್ಪಷ್ಟವಾಗಿದೆ.

ಪ್ರತಿರಕ್ಷಾ ಮಾಡ್ಯೂಲೇಟರ್ :
ಒಂದು ಪ್ರಾಯೋಗಿಕ ಪರೀಕ್ಷೆಯು, ಹಾಗಲಕಾಯಿಯು ಪ್ರತಿರಕ್ಷಾ ಕೋಶದ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ ಹಾಗೂ ಈ ರೀತಿಯಾಗಿ ಅರ್ಬುದ ಕ್ಯಾನ್ಸರ್ ಹಾಗೂ ಊಗಿ ಸೋಂಕಿತರಿಗೆ ಪ್ರಯೋಜನಕಾರಿಯಾಗಿರುವ ಬಗ್ಗೆ ಬಹಳ ಸೀಮಿತ ಸಾಕ್ಷ್ಯ ಒದಗಿಸಿತು.

ಮಧುಮೇಹ ನಿಯಂತ್ರಣ :
ಹಾಗಲಕಾಯಿಯು ಡಯಾಬಿಟಿಸ್ ಮೆಲ್ಲಿಟಸ್ ಟೈಪ್ 2ನ್ನು ತಡೆಗಟ್ಟಲು ಅಥವಾ ಅದನ್ನು ನಿಷ್ಫಲಗೊಳಿಸಲು ಸಹಾಯಕವಾಗಿದೆಯೆಂದು ಜನಪದೀಯ ಚಿಕಿತ್ಸಾ ವಿಧಾನದ ಜ್ಞಾನವು ಸೂಚಿಸುತ್ತದೆ. ಪನಾಮಾದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ, ಈ ಉದ್ದೇಶಕ್ಕಾಗಿ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ. ಇನ್ಸುಲಿನ್ ಹೀರಲು ಒಟ್ಟಾರೆಯಾಗಿ ಬಂಧಿಸುವ ಪ್ರೋಟಿನ್ ಅಲ್ಲದ ನಿರ್ಧಿಷ್ಟ ಪೂರಕದ ಕಾರಣದಿಂದಾಗಿ ಇನ್ಸುಲಿನ್-ಮಾದರಿಯ ಚಟುವಟಿಕೆಯನ್ನು ಹೊಂದಿರುವ ಲೆಕ್ಟಿನ್ ನನ್ನೂ ರೋಗ ನಿರೋಧಕವಲ್ಲದಿದ್ದರೂ ಅದರಂತೆ ವರ್ತಿಸುವುದು ಸಹ ಹಾಗಲಕಾಯಿ ಒಳಗೊಂಡಿದೆ.
ಈ ಲೆಕ್ಟಿನ್, ಹೊರಮೈನ ಕೋಶಗಳ ಮೇಲೆ ಪರಿಣಾಮ ಬೀರುವ ಮೂಲಕ ರಕ್ತದಲ್ಲಿನ ಗ್ಲುಕೋಸ್ ಮಟ್ಟ ತಗ್ಗಿಸುತ್ತದೆ. ಇದು ಮಿದುಳು, ಹಸಿವಿನ ಅಪೇಕ್ಷೆ ನಿಗ್ರಹಿಸುವ ಇನ್ಸುಲಿನ್‍ನ ಪರಿಣಾಮಕ್ಕೆ ಸದೃಶವಾಗಿದೆ. ಈ ಲೆಕ್ಟಿನ್, ಹಾಗಲಕಾಯಿಯನ್ನು ತಿಂದ ನಂತರ ಬೆಳವಣಿಗೆಯಾಗುವ ಹೈಪೋಗ್ಲೈಸೆಮಿಕ್ ಪರಿಣಾಮಕ್ಕೆ ಪೂರಕವೆನ್ನುವಂತೆ ಪ್ರಮುಖವಾಗಿರುವ ಪರಿಣಾಮ ಬೀರುತ್ತದೆ.

ಕ್ಯಾನ್ಸರ್ ಪ್ರತಿರೋಧಕ:
ಹಾಗಲಕಾಯಿಯಲ್ಲಿ ಎರಡು ಸಂಯುಕ್ತಗಳಿವೆ ಎಲೆಯೋಸ್ಟೀರಿಕ್ ಆಮ್ಲ ಬೀಜಗಳಿಂದ ಹಾಗೂ 15,16-ಡೈ ಹೈಡ್ರಾಕ್ಸಿ-ಎಲೆಯೋಸ್ಟೀರಿಕ್ ಆಮ್ಲಗಳು ಹಣ್ಣಿನಿಂದ ವಿಟ್ರೋನಲ್ಲಿನ ಲ್ಯುಕೆಮಿಯಾ ಕೋಶಗಳ ವಿನಾಶದಂತಹ ಸ್ವಯಂ ಅಪೋಪ್ರೋಸಿಸ್‍ನ್ನು ಉಂಟು ಮಾಡಿರುವುದು ಪತ್ತೆಯಾಗಿದೆ.
ಸುಮಾರು ಶೇ.0.01ರಷ್ಟು ಹಾಗಲಕಾಯಿ ಎಣ್ಣೆಯನ್ನು ಒಳಗೊಳ್ಳುವ ಆಹಾರವು ಶೇ.0.006ರಷ್ಟು ಎಲೆಯೋಸ್ಟೀರಿಕ್ ಆಮ್ಲವಾಗಿ ಇಲಿಗಳಲ್ಲಿ, ಅಜೋಕ್ಸಿಮೀಥೇನ್ ಉಂಟು ಮಾಡುವ ದೊಡ್ಡ ಕರುಳಿನ ಅರ್ಬುದಂತಹ ಕಾರ್ಸಿನೋಜೆನೆಸಿಸ್‍ನ್ನು ತಡೆಗಟ್ಟಿರುವುದು ಪತ್ತೆಯಾಗಿದೆ.

ಹಾಗಲಕಾಯಿಯ ಇತರೆ ಉಪಯೋಗಗಳು :
ಹಾಗಲಕಾಯಿಯನ್ನು ಬೇಧಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗೂ ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ಅಸ್ವಸ್ಥತೆಗಳಿಗಾಗಿ ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭಸ್ರಾವಕವಾಗಿ, ಹಾಗೂ ಶಿಶುವಿನ ಜನನಕ್ಕೆ ಸಹಕಾರಿಯಾಗಲು ಸಹ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್, ಮೂಲವ್ಯಾಧಿ ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು. ಹಾಗಲಕಾಯಿ ಲಿವರ್ ಟಾನಿಕ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ.

ಮುಂಜಾಗ್ರತೆಗಳು :
ಹಾಗಲಕಾಯಿಯ ಬೀಜಗಳು ವಿಷಕಾರಿಯೆನಿಸಿದ ವಿಸಿನೆಯನ್ನು ಒಳಗೊಂಡಿರುತ್ತವೆ. ಕೆಲವೊಮ್ಮೆ ಈ ರೀತಿಯಾಗಿ ಇದಕ್ಕೆ ಈಡಾಗುವ ವ್ಯಕ್ತಿಗಳಲ್ಲಿ ರಕ್ತಹೀನತೆಯ ಫಾವಿಸಂನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅದರ ಜೊತೆಯಲ್ಲಿ, ಬೀಜಗಳ ಕೆಂಪು ರಸಲೆಗಳು ಮಕ್ಕಳಿಗೆ ವಿಷಕಾರಿಯೆಂದು ವರದಿಯಾಗಿದೆ ಹಾಗೂ ಹಣ್ಣನ್ನು ಗರ್ಭಧಾರಣೆಯ ಸಮಯದಲ್ಲಿ ಸೇವಿಸುವುದು ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳಿತು.

Please follow and like us:

Leave a Reply

Top