You are here
Home > Business > ಮಾಚ್೯ 22 ಕ್ಕೆ ಮೆಟ್ರೋ ಬಂದ್

ಮಾಚ್೯ 22 ಕ್ಕೆ ಮೆಟ್ರೋ ಬಂದ್

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ನಮ್ಮ ಮೆಟ್ರೋ ನೌಕರರು ಮಾರ್ಚ್ 22 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಬಿ.ಎಂ.ಆರ್.ಸಿ.ಎಲ್. ಅಧಿಕಾರಿಗಳು ಮತ್ತು ಮೆಟ್ರೋ ನೌಕರರ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಸಂಧಾನ ಸಭೆಯಲ್ಲಿ ನೌಕರರ ಬೇಡಿಕೆಗಳ ಕುರಿತಾಗಿ ಚರ್ಚೆ ನಡೆದಿದ್ದು, ಅಧಿಕಾರಿಗಳು ಸಮಯಾವಕಾಶ ಕೇಳಿದ ಕಾರಣ, ಸಭೆ ವಿಫಲವಾಗಿದೆ. ಮಾರ್ಚ್ 22 ರ ಬೆಳಿಗ್ಗೆ 5 ಗಂಟೆಯಿಂದ ಮೆಟ್ರೋ ನಿಲ್ದಾಣಕ್ಕೆ ಆಗಮಿಸದೇ ಮುಷ್ಕರ ನಡೆಸಲು ನೌಕರರು ಮುಂದಾಗಿದ್ದಾರೆ.

ಮಾರ್ಚ್ 19 ರಿಂದ ಮೆಟ್ರೋದ ಯಾವುದೇ ನೌಕರರಿಗೆ ರಜೆ ನೀಡದಂತೆ ಸುತ್ತೋಲೆ ಹೊರಡಿಸಲಾಗಿದೆ. ನೌಕರರು ಮುಷ್ಕರ ಕೈಗೊಂಡಿರುವುದರಿಂದ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಸಂಧಾನ ಸಭೆ ನಡೆಸಿ ಮುಷ್ಕರ ಕೈಬಿಡುವಂತೆ ನೌಕರರ ಮನವೊಲಿಸುವ ಸಾಧ್ಯತೆ ಇದೆ.

Please follow and like us:

Leave a Reply

Top