You are here
Home > Karnataka Election > ಬಿಗ್ ನ್ಯೂಸ್ : ರಾಜಕೀಯ ಪ್ರವೇಶದ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‍ ಹೇಳಿದ್ದೇನು ಗೊತ್ತಾ?

ಬಿಗ್ ನ್ಯೂಸ್ : ರಾಜಕೀಯ ಪ್ರವೇಶದ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‍ ಹೇಳಿದ್ದೇನು ಗೊತ್ತಾ?

ದಾವಣಗೆರೆ: ನಾನು ರಾಜಕೀಯಕ್ಕೆ ಬರೋದಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನ ಪತ್ನಿ ಗೀತಾ ಶಿವರಾಜ್‍ಕುಮಾರ್ ಮಾತ್ರ ರಾಜಕೀಯದಲ್ಲಿ ಇರುತ್ತಾರೆ ಎಂದು ಶಿವರಾಜ್‍ಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

ಅವರು ಸೋಮವಾರ ಟಗರು ಸಿನಿಮಾದ ವಿಜಯೋತ್ಸವವನ್ನು ನಗರದಲ್ಲಿ ಆಯೋಜಿಸಲಾಗಿತ್ತು ಈ ವೇಳೆ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು ಇದೇ ವೇಳೆ ಅವರು ಮಾತನಾಡಿ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ನಾನು ಸ್ವಾಗತ ಮಾಡುತ್ತೇನೆ. ಉಪೇಂದ್ರ ಯಾವಾಗಲೂ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದರ ಬಗ್ಗೆ ಚಿಂತಿಸುತ್ತಿರುತ್ತಾರೆ. ನಾನು ಯಾವಾಗಲೂ ಉಪೇಂದ್ರ ಅವರಿಗೆ ಬೆಂಬಲ ನೀಡುತ್ತೇನೆ ಅಂತ ಹೇಳಿದರು.

ಇನ್ನು ಟಗರು ಸಿನಿಮಾ ವಿಜಯೋತ್ಸವದ ಹಿನ್ನೆಲೆಯಲ್ಲಿ ದಾವಣಗೆರೆ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದ ವರೆಗೂ ಮೆರವಣಿಗೆ ಮಾಡಲಾಯ್ತು. ನಗರಕ್ಕೆ ಆಗಮಿಸಿದ್ದ ಶಿವರಾಜ್‍ಕುಮಾರ್ ರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಚಿತ್ರಮಂದಿರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನೂಕು ನುಗ್ಗಲು ಸಹ ಉಂಟಾಯಿತು. ಪೊಲೀಸರು ಅಭಿಮಾನಿಗಳ ನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.

Please follow and like us:

Leave a Reply

Top