You are here
Home > ಆರೋಗ್ಯ > ಡೆಂಘೀ ನಿವಾರಣೆಗೆ ಬೇಕಿರುವ ಕಬ್ಬಿನಂಶದ ತರಕಾರಿಗಳ ಪಟ್ಟಿ ಇಲ್ಲಿದೆ?

ಡೆಂಘೀ ನಿವಾರಣೆಗೆ ಬೇಕಿರುವ ಕಬ್ಬಿನಂಶದ ತರಕಾರಿಗಳ ಪಟ್ಟಿ ಇಲ್ಲಿದೆ?

ಡೆಂಘೀ ಎಂಬ ಭಯಾನಕ ಜ್ವರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಈ ಡೆಂಘೀ ಜ್ವರವು ನಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣ ಕಡಿಮೆ ಮಾಡುತ್ತದೆ. ಇದು ಮುಂದೆ ಪ್ರಾಣಕ್ಕೆ ಸಂಚಕಾರ ತರಬಹುದು. ಇದು ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಅದು ವಂಶವಾಹಿಗಳಿಂದ, ಔಷಧಿಗಳಿಂದ, ಆಲ್ಕೋಹಾಲ್ ಸೇವನೆಯಿಂದ, ವೈರಸ್‍ಗಳಿಂದ ಕೆಲವೊಂದು ನಿರ್ದಿಷ್ಟ ರೋಗಗಳಿಂದ ಕಾಣಿಸಿಕೊಳ್ಳಬಹುದು. ಈ ಪ್ಲೇಟ್‍ಲೆಟ್‍ಗಳ ಸಂಖ್ಯೆಯನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ನಾವು ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಇಲ್ಲಿ ಪಟ್ಟಿ ಮಾಡಲಾಗಿರುವ ಆಹಾರಗಳು ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

ಪರಂಗಿ ಎಲೆ: ನಿಮ್ಮ ರಕ್ತ ಕಡಿಮೆಯಿದ್ದಾಗ ಸೇವಿಸಬಹುದಾದ ಆಹಾರ ಪರಂಗಿ ಎಲೆಗಳು. ಒಂದು ಚೊಂಬು ನೀರಿನಲ್ಲಿ ಪರಂಗಿ ಎಲೆಗಳನ್ನು ಹಾಕಿ ಅದನ್ನು ಹದವಾಗಿ ಕಾಯಿಸಿ. ಅದರ ರಸ ನೀರಿನಲ್ಲಿ ಬರಬೇಕು ಅಷ್ಟೆ. ಈ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿ.

ದಾಳಿಂಬೆ: ಎಲ್ಲ ಕೆಂಪು ಹಣ್ಣುಗಳಲ್ಲಿ ಕಬ್ಬಿಣ್ಣಾಂಶ ಹೆಚ್ಚಾಗಿರುತ್ತದೆ. ಇವುಗಳೆಲ್ಲವೂ ಪ್ಲೇಟ್‍ಲೆಟ್‍ಗಳನ್ನು ಹೆಚ್ಚು ಮಾಡಲು ಸಹಕಾರಿಯಾಗುತ್ತದೆ. ಇವುಗಳು ಡೆಂಘೀಜ್ವರದ ಮೇಲೆ ಹೋರಾಡಲು ಶಕ್ತಿ ನೀಡುತ್ತದೆ.

ಹಸಿರು ಸೊಪ್ಪು: ಸೊಪ್ಪಿನಲ್ಲಿ ವಿಟಮಿನ್ ಕೆ ಅಧಿಕ ಪ್ರಮಾಣದಲ್ಲಿರುತ್ತದೆ. ಹಸಿರು ಸೊಪ್ಪು ಸೇವಿಸುವುದರಿಂದ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸಿಕೊಳ್ಳಬಹುದು.

ಬೀಟ್‍ರೂಟ್: ಬೀಟ್‍ರೂಟ್ ಸಹ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸುತ್ತದೆ. ಯಾರಿಗೆ ಅನಿಮಿಯಾ ಸಮಸ್ಯೆಯಿದೆಯೋ ಅವರು ವಾರಕ್ಕೆ ಎರಡು ಬಾರಿಯಾದರೂ ಬೀಟ್‍ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಕುಡಿಯುವ ಪರಿಪಾಠ ಇರಿಸಿಕೊಳ್ಳಬೇಕು. ಆಗಲೇ ಅವರ ರಕ್ತದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣ ಸಮತೋಲನದಲ್ಲಿರುತ್ತದೆ.

ಬೆಳ್ಳುಳ್ಳಿ: ರಕ್ತದಲ್ಲಿ ಪ್ಲೇಟ್‍ಲೆಟ್ ಹೆಚ್ಚಿಸಿಕೊಳ್ಳಲು ಬೆಳ್ಳುಳ್ಳಿ ತಿನ್ನಬಹುದು. ಇದನ್ನು ಯಾವುದೇ ಪದಾರ್ಥದ ಜತೆಗೆ ತಿನ್ನಬಹುದು.

Please follow and like us:

Leave a Reply

Top