You are here
Home > International > ಚೆಂಡು ವಿರೂಪ ಪ್ರಕರಣ: ಸ್ಮಿತ್, ವಾರ್ನರ್, ಬೆನ್‌ಕ್ರಾಫ್ಟ್ ವಿರುದ್ಧ ತನಿಖೆ ನಡೆದಿದೆ; ಜೇಮ್ಸ್ ಸುದರ್‌ಲ್ಯಾಂಡ್

ಚೆಂಡು ವಿರೂಪ ಪ್ರಕರಣ: ಸ್ಮಿತ್, ವಾರ್ನರ್, ಬೆನ್‌ಕ್ರಾಫ್ಟ್ ವಿರುದ್ಧ ತನಿಖೆ ನಡೆದಿದೆ; ಜೇಮ್ಸ್ ಸುದರ್‌ಲ್ಯಾಂಡ್

ಸಿಡ್ನಿ: ಆಸ್ಟ್ರೇಲಿಯಾ ತಂಡದ ಆಟಗಾರರಿಂದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆಟಗಾರರ ವಿರುದ್ಧ ತನಿಖೆ ಮುಂದುವರೆದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸುದರ್‌ಲ್ಯಾಂಡ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಜೇಮ್ಸ್ ಸುದರ್‌ಲ್ಯಾಂಡ್ ಕ್ಷಮೆಯಾಚಿಸಿದರು. ಇದೇ ವೇಳೆ ಪ್ರಕರಣದ ಸಂಬಂಧ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್‌ಕ್ರಾಫ್ಟ್ ವಿರುದ್ಧ ತನಿಖೆ ಮುಂದುವರೆದಿದೆ ಎಂದರು.

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾದ ಕೋಚ್ ಡರೇನ್ ಲೆಹ್ಮನ್ ಅವರು ರಾಜಿನಾಮೆ ನೀಡಿಲ್ಲ. ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಲೆಹ್ಮನ್ ಗೆ ಜೇಮ್ಸ್ ಸುದರ್‌ಲ್ಯಾಂಡ್ ಕ್ಲೀನ್ ಚೀಟ್ ಕೊಟ್ಟಿದ್ದಾರೆ.

ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್‌ಕ್ರಾಫ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿಷೇಧ ಹೇರಲಾಗಿದ್ದು ಅವರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಜೇಮ್ಸ್ ಸುದರ್‌ಲ್ಯಾಂಡ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು.

Please follow and like us:

Leave a Reply

Top